ಹುಡುಕಿ

NEPAL-POLITICS-UNREST NEPAL-POLITICS-UNREST  (AFP or licensors)

ನೇಪಾಳ: ದೇಶದ ಭವಿಷ್ಯಕ್ಕಾಗಿ ಯುವಜನತೆಯ ಬದ್ಧತೆಯನ್ನು ಧರ್ಮಸಭೆಯು ಹಂಚಿಕೊಂಡಿದೆ

ಇತ್ತೀಚಿನ ಅಶಾಂತಿಯ ಘಟನೆಗಳ ನಂತರ, ಶಾಲೆಗಳು ಮತ್ತೆ ತೆರೆದು ಪರಿವರ್ತನಾ ಸರ್ಕಾರದಲ್ಲಿ ವಿಶ್ವಾಸ ಬೆಳೆಯುತ್ತಿದ್ದಂತೆ ನೇಪಾಳದಲ್ಲಿ ಶಾಂತತೆ ಮರಳಿದೆ ಎಂದು ನೇಪಾಳದ ಧರ್ಮಪ್ರಾಂತ್ಯದ ಪ್ರೇಷಿತಾ ಆಡಳಿತಾಧಿಕಾರಿಯಾದ ಧರ್ಮಗುರು ಸಿಲಾಸ್ ಬೊಗಾಟಿರವರು ಹೇಳಿದ್ದಾರೆ.

ಸಿಸ್ಟರ್ ಕ್ರಿಸ್ಟೀನ್ ಮಾಸಿವೊ, ಸಿಪಿಎಸ್

ಕೆಲವು ದಿನಗಳ ಕಾಲ ನಡೆದ ಪ್ರತಿಭಟನೆ ಮತ್ತು ಅಶಾಂತಿಯ ನಂತರ ನೇಪಾಳದಲ್ಲಿ ಶಾಂತ ವಾತಾವರಣ ಮರಳಿದೆ. ಕಥೋಲಿಕ ಮತ್ತು ಸಾರ್ವಜನಿಕ ಶಾಲೆಗಳು ಮತ್ತೆ ತೆರೆದಿವೆ ಹಾಗೂ ದೈನಂದಿನ ಜೀವನ ಕ್ರಮೇಣ ಪುನರಾರಂಭಗೊಳ್ಳುತ್ತಿದೆ.

ಮುಂದಿನ ವರ್ಷ ಹೊಸ ಚುನಾವಣೆಗಳು ನಡೆಯುವ ಮೊದಲು ಆರು ತಿಂಗಳ ಪರಿವರ್ತನೆಯ ಅವಧಿಯಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪ್ರಧಾನಿ ಸುಶೀಲಾ ಕರ್ಕಿರವರ ನಾಯಕತ್ವದಲ್ಲಿ ವಿಶ್ವಾಸ ಇರಿಸಲಾಗಿದೆ ಎಂದು ಧರ್ಮಗುರು ಸಿಲಾಸ್ ಬೊಗಾಟಿರವರು ಹೇಳಿದ್ದಾರೆ.

ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನೇಪಾಳದ ಧರ್ಮಾಪ್ರಾಂತ್ಯಾಧಕಾರಿ ಯಾದ ಪ್ರೇಷಿತ ಆಡಳಿತಾಧಿಕಾರಿ, ಪ್ರಸ್ತುತ ಪರಿಸ್ಥಿತಿಯನ್ನು ಅನಿಶ್ಚಿತತೆ ಮತ್ತು ಸುಪ್ತ ಉದ್ವಿಗ್ನತೆ ಎಂದು ಬಣ್ಣಿಸಿದ್ದಾರೆ, ಆದರೆ ಇದು ಭರವಸೆಯಿಂದ ಕೂಡಿದೆ.

ಕಥೋಲಿಕ ಸಮುದಾಯವಾಗಿ, ನಮಗೆ ಪ್ರಧಾನಿ ಕಾರ್ಕಿರವರ ಮೇಲೆ ವಿಶ್ವಾಸವಿದೆ ಎಂದು ಅವರು ಹೇಳಿದರು. "ಹಿಂದೆ, ಒಬ್ಬ ವಕೀಲರಾಗಿ, ಅವರು ನಮ್ಮ ಒಬ್ಬ ಯಾಜಕರನ್ನು ಮತ್ತು ಹಲವಾರು ಧಾರ್ಮಿಕ ಸಹೋದರಿಯರ ವಿರುದ್ಧ ತಪ್ಪಾಗಿ, ಆರೋಪ ಹೊರಿಸಲ್ಪಟ್ಟವರ ವಿರುದ್ಧ ಹೋರಾಟ ಮಾಡಿ, ಆ ವಿಷಯದಲ್ಲಿ ನ್ಯಾಯವನ್ನು ಸಮರ್ಥಿಸಿಕೊಂಡಿದ್ದರು. ಮುಂಬರುವ ತಿಂಗಳುಗಳಲ್ಲಿ ಅವರು ಕಾನೂನಿನ ನಿಯಮ ಮತ್ತು ನ್ಯಾಯದ ತತ್ವಗಳನ್ನು ಎತ್ತಿಹಿಡಿಯುತ್ತಾರೆ ಎಂದು ನಾವು ನಂಬುತ್ತೇವೆ.

ರಾಜಕೀಯ ಪಕ್ಷಗಳು ಆಯೋಜಿಸುವ ಮತ್ತಷ್ಟು ಪ್ರದರ್ಶನಗಳ ಸಾಧ್ಯತೆಯನ್ನು ಧರ್ಮಗುರು ಬೊಗಾಟಿರವರು ಗಮನಿಸಿದರು. ಇದು ಹಿಂಸಾಚಾರಕ್ಕೆ ಕಾರಣವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಅವರು ಒತ್ತಿ ಹೇಳಿದರು.

ಅದೇ ಸಮಯದಲ್ಲಿ, ಅವರು ನೇಪಾಳ ಸಮಾಜದಲ್ಲಿ ಯುವಜನರ ಬೆಳೆಯುತ್ತಿರುವ ಧ್ವನಿಯ ಹೊಸ ಬೆಳವಣಿಗೆಯನ್ನು ಸೂಚಿಸಿದರು. ಅದು "ಜನರೇಷನ್ Z" ಹೊರಹೊಮ್ಮುತ್ತಿದೆ, ಇದು ನಾಗರಿಕ ಜವಾಬ್ದಾರಿಯ ಪ್ರಜ್ಞೆಯಿಂದ ನಡೆಸಲ್ಪಡುತ್ತಿದೆ. "ಈ ಯುವಕರು 'ನಾವು ಕಾಳಜಿ ವಹಿಸುತ್ತೇವೆ' ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತಿದ್ದಾರೆ, ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಯ ಕಡೆಗೆ ತಮ್ಮ ಕರ್ತವ್ಯದ ಆಳವಾದ ಅರಿವನ್ನು ತೋರಿಸುತ್ತಿದ್ದಾರೆ ಎಂದು ಧರ್ಮಗುರು ಬೊಗಾಟಿರವರು ಹೇಳಿದರು. ಇದು ಶಾಂತಿ ಮತ್ತು ನ್ಯಾಯದಲ್ಲಿ ಬೇರೂರಿದ್ದರೆ ಇದು ಸಕಾರಾತ್ಮಕ ಸಂಕೇತವಾಗಿದೆ.

"ಧರ್ಮಸಭೆಯ ನಿಲುವು ಸ್ಪಷ್ಟವಾಗಿದೆ" ಎಂದು ಪ್ರೇಷಿತ ಆಡಳಿತಾಧಿಕಾರಿ ಹೇಳಿದರು. ನಾವು ಎಲ್ಲಾ ರೀತಿಯ ಹಿಂಸಾಚಾರವನ್ನು ಬೇಡ ಎಂದು ಹೇಳುತ್ತೇವೆ ಮತ್ತು ಸಮಾಜದ ಶಾಂತಿಯುತ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ, ದೇಶದ ಆಳವಾದ ಗಾಯಗಳಲ್ಲಿ ಒಂದಾದ ಭ್ರಷ್ಟಾಚಾರವನ್ನು ಎದುರಿಸಲು ಸಮರ್ಥವಾಗಿರುವ ಸರ್ಕಾರದಲ್ಲಿ ಭರವಸೆ ಇಡುತ್ತೇವೆ ಎಂದು ಅವರು ಹೇಳಿದರು.

33 ಮಿಲಿಯನ್ ಜನಸಂಖ್ಯೆಯ ನೇಪಾಳದಲ್ಲಿರುವ ಕಥೋಲಿಕ ಧರ್ಮಸಭೆಯು ಸುಮಾರು 8,000 ಭಕ್ತವಿಶ್ವಾಸಿಗಳನ್ನು ಹೊಂದಿದೆ ಎಂದು ಧರ್ಮಗುರು ಬೊಗಾಟಿರವರು ಹೇಳಿದರು.

ಪ್ರತಿಭಟನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ನೇಪಾಳ ಸೆಪ್ಟೆಂಬರ್ 17 ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಆಚರಿಸಿತು. ಮಧ್ಯಂತರ ಸರ್ಕಾರ ಅವರನ್ನು "ಹುತಾತ್ಮರು" ಎಂದು ಘೋಷಿಸಿದೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುವ ಭರವಸೆ ನೀಡಿದೆ.

ಇತ್ತೀಚಿನ ಗಲಭೆಯಲ್ಲಿ ಎಪ್ಪತ್ತೆರಡು ಯುವಕರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ಕರ್ಕಿ ಅವರು ಹಲವಾರು ಗಾಯಾಳುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ, ಇದು ದೇಶದಲ್ಲಿನ ವಿಭಜನೆಗಳನ್ನು ಗುಣಪಡಿಸುವ ಅವರ ಬದ್ಧತೆಯನ್ನು ಸೂಚಿಸುತ್ತದೆ ಮತ್ತು ಸಾಮೀಪ್ಯದ ಸೂಚಕವಾಗಿದೆ.
 

19 ಸೆಪ್ಟೆಂಬರ್ 2025, 18:57