ಹುಡುಕಿ

FILES-MYANMAR-COUP-CONFLICT FILES-MYANMAR-COUP-CONFLICT 

ಮ್ಯಾನ್ಮಾರ್ ಧರ್ಮಾಧ್ಯಕ್ಷರು: 'ನಾಗರಿಕರು ಬಳಲುತ್ತಿದ್ದಾರೆ, ಬದುಕಲು ಪ್ರಯತ್ನಿಸುತ್ತಿದ್ದಾರೆ'

ಮ್ಯಾನ್ಮಾರ್‌ನಲ್ಲಿ ರಕ್ತಪಾತ ಮುಂದುವರೆದು, ಅಂತರ್ಯುದ್ಧವು ದೇಶವನ್ನು ದುರ್ಬಲಗೊಳಿಸುತ್ತಿರುವಾಗ ರಾಖೈನ್ ರಾಜ್ಯದ ಪ್ಯಾಯ್‌ನ ಧರ್ಮಾಧ್ಯಕ್ಷರಾದ ಪೀಟರ್ ಟಿನ್ ವಾಯ್ 'ಬದುಕುಳಿಯಲು ಪ್ರಯತ್ನಿಸುತ್ತಿರುವ' ಮುಗ್ಧ ನಾಗರಿಕರ ಮೇಲೆ, ಬಲವಂತವಾಗಿ ಸೈನ್ಯಕ್ಕೆ ಸೇರಲು ಮತ್ತು ಯುದ್ಧದಲ್ಲಿ ಹೋರಾಡಲು, ಪಲಾಯನ ಮಾಡಲು ದೃಢನಿಶ್ಚಯ ಮಾಡಿರುವ ಯುವಕರ ಮೇಲೂ ದುರಂತ ಪರಿಣಾಮಗಳನ್ನು ಬೀರಲಿದೆ ಎಂದು ಖಂಡಿಸುತ್ತಾರೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಹೋರಾಟ ಮುಂದುವರೆದಂತೆ ಮುಗ್ಧ ನಾಗರಿಕರು ಯಾತನೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಪ್ಯಾಯ್ನ ಧರ್ಮಾಧ್ಯಕ್ಷರಾದ ಪೀಟರ್ ಟಿನ್ ವೈರವರು ವಿಷಾದಿಸುತ್ತಾರೆ.

ವಿಶ್ವಗುರುಗಳ ಸುದ್ದಿ ಸಂಸ್ಥೆ ಫೈಡ್ಸ್ ಪ್ರಕಾರ, ಪಶ್ಚಿಮ ಮ್ಯಾನ್ಮಾರ್‌ನಲ್ಲಿ ರಾಜ್ಯದ ಬಹುತೇಕ ಸಂಪೂರ್ಣ ಪ್ರಾಂತ್ಯವನ್ನು ಒಳಗೊಂಡಿರುವ ಅಂತರ್ಯುದ್ಧವು ವಿನಾಶವನ್ನುಂಟುಮಾಡಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವಾಗ ನಡೆಯುತ್ತಿರುವ ಹೋರಾಟಗಳತ್ತ ಧರ್ಮಾಧ್ಯಕ್ಷರು ಗಮನ ಸೆಳೆದರು.

ದುರಂತವೆಂದರೆ, ಇದರಲ್ಲಿ ಸೆಪ್ಟೆಂಬರ್ 12 ರಂದು ಬರ್ಮಾ ಸೈನ್ಯ ನಡೆಸಿದ ವೈಮಾನಿಕ ದಾಳಿಯೂ ಸೇರಿದೆ, ಈ ದಾಳಿಯಲ್ಲಿ ಕ್ಯುಕ್ತಾವ್ ಪಟ್ಟಣದ ಎರಡು ಖಾಸಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು 15 ರಿಂದ 21 ವರ್ಷದೊಳಗಿನ 20 ಯುವಕರನ್ನು ಕೊಂದಿತು. ರಾಖೈನ್ ರಾಜ್ಯದ ಪೂರ್ವ ಗಡಿಯಲ್ಲಿಯೂ ತೀವ್ರ ಹೋರಾಟ ಮುಂದುವರೆದಿದೆ.

ರಾಜ್ಯದ ಹೆಚ್ಚಿನ ಭಾಗಗಳಲ್ಲಿ, ಅಧಿಕಾರವು ಅರಾಕನ್ ಸೈನ್ಯದ (AA) ಕೈಯಲ್ಲಿದೆ ಎಂದು ಪ್ಯಾಯ್ನ ಧರ್ಮಾಧ್ಯಕ್ಷರಾದ ಪೀಟರ್ ಟಿನ್ ವೈರವರು ಫಿಡೆಸ್‌ಗೆ ತಿಳಿಸಿದರು. ಈ ಜನಾಂಗೀಯ ಸಶಸ್ತ್ರ ಗುಂಪು ರಾಖೈನ್‌ನ ಹೆಚ್ಚಿನ ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಮತ್ತು ಬರ್ಮೀಸ್ ನಿಯಮಿತ ಸೈನ್ಯದ ವಿರುದ್ಧ ಹೋರಾಡುತ್ತಿದೆ. AA ಈಗ 17 ಪುರಸಭೆಗಳಲ್ಲಿ 14 ಪುರಸಭೆಗಳನ್ನು ಹೊಂದಿದೆ.

ನೆಲೆ ಕಳೆದುಕೊಂಡ ನಂತರ, ಬರ್ಮಾ ಸೇನೆಯು ವೈಮಾನಿಕ ಬಾಂಬ್ ದಾಳಿಗಳನ್ನು ಆಶ್ರಯಿಸುತ್ತಿದೆ ಎಂದು ಫೈಡ್ಸ್ ವಿವರಿಸುತ್ತದೆ, ಇದು ನಾಗರಿಕರ ಮನೆಗಳು ಮತ್ತು ಕಟ್ಟಡಗಳ ಮೇಲೂ ಪರಿಣಾಮ ಬೀರುತ್ತಿದೆ.

'ಜನರು ಬದುಕಲು ಪ್ರಯತ್ನಿಸುತ್ತಿದ್ದಾರೆ'
ಹಲವು ಪ್ರದೇಶಗಳಲ್ಲಿನ ನಾಗರಿಕರ ಪರಿಸ್ಥಿತಿಯನ್ನು ಕಂಡು ಬರ್ಮಾದ ಧರ್ಮಾಧ್ಯಕ್ಷರು ವಿಷಾದಿಸಿದರು, ಇಲ್ಲಿನ "ಸಂವಹನ ಕಡಿತಗೊಂಡಿದೆ, ಶಿಕ್ಷಣ ವ್ಯವಸ್ಥೆಯು ಬಿಕ್ಕಟ್ಟಿನಲ್ಲಿದೆ ಮತ್ತು ಜನರು ಬದುಕಲು ಪ್ರಯತ್ನಿಸುತ್ತಿದ್ದಾರೆ." ಸುಮಾರು 30,000 ಭಕ್ತವಿಶ್ವಾಸಿಗಳನ್ನು ಹೊಂದಿರುವ ಅವರ ಧರ್ಮಕ್ಷೇತ್ರ, ಆ ಪ್ರದೇಶದಲ್ಲಿ ಹನ್ನೆರಡು ಧರ್ಮಕೇಂದ್ರಗಳನ್ನು ಹೊಂದಿದ್ದು, ಅವರ ಧ್ಯೇಯವನ್ನು ಮುಂದುವರಿಸುತ್ತಿದೆ ಎಂದು ಧರ್ಮಾಧ್ಯಕ್ಷರು ವಿವರಿಸಿದರು.

ದೈನಂದಿನ ಜೀವನವನ್ನು ನಡೆಸಲು ಮತ್ತು ಭೌತಿಕವಾಗಿ ತಮ್ಮನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರಿಗೆ, ಯಾಜಕರು ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ, ಅವರು ಸಂಸ್ಕಾರಗಳನ್ನು ಆಚರಿಸಲು ಮತ್ತು ದುಃಖದ ನಡುವೆಯೂ ದೇವಾಲಯಗಳನ್ನು ತೆರೆದಿಡಲು ಶ್ರಮಿಸುತ್ತಾರೆ ಎಂದು ಅವರು ಹೇಳುತ್ತಾರೆ.
 

20 ಸೆಪ್ಟೆಂಬರ್ 2025, 22:30