ಪ್ರಭುವಿನ ದಿನದ ಚಿಂತನೆ: ಪ್ರಭು ನಮಗೆ ಹೇಳುತ್ತಿರುವುದೇನು?
ಎಡ್ಮಂಡ್ ಪವರ್, OSB
ಇಂದಿನ ಶುಭಸಂದೇಶದ ನುಡಿಗಟ್ಟಿಗೆ ಸಂಪೂರ್ಣವಾಗಿ ರಾಜಿಯಾಗಲು ಸಾಧ್ಯವಿಲ್ಲ: ನೀವು ದೇವರು ಮತ್ತು ಧನಕ್ಕೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಯೇಸುವಿನ ಈ ಸವಾಲಿನ ನುಡಿಗಟ್ಟು ಮತ್ತಾಯನ ಸುವಾರ್ತೆಯಲ್ಲಿಯೂ ಪುನರಾವರ್ತನೆಯಾಗಿದೆ (ಮತ್ತಾಯ 6:24) ಮತ್ತು ಇಬ್ಬರು ಸಂಭಾವ್ಯ ಧಣಿಗಳ ನಡುವಿನ ವ್ಯತ್ಯಾಸದೊಂದಿಗೆ, "ಧನ" ಒಬ್ಬ ವ್ಯಕ್ತಿ ಎಂದು ಅದು ಸೂಚಿಸಬಹುದು. ವಾಸ್ತವವಾಗಿ ಕೆಲವರು ಇದನ್ನು ರಾಕ್ಷಸ ಅಥವಾ ಪೇಗನ್/ಅನ್ಯ ದೇವತೆ ಎಂದು ನೋಡಿದ್ದಾರೆ. ಬಹುಶಃ ಸುರಕ್ಷಿತ ಮಾರ್ಗವೆಂದರೆ, ಅದನ್ನು ಸಂಪತ್ತಿನ, ವಿಶೇಷವಾಗಿ ಹಣದ ನಕಾರಾತ್ಮಕ ವ್ಯಕ್ತಿತ್ವವಾಗಿ ನೋಡುವುದು. ಅದರ ಆಕರ್ಷಣೆಗಳಿಗೆ ಸಂಪೂರ್ಣವಾಗಿ ಮರುಗಿಹೋಗುವ ಜನರು ಬಹುಶಃ ಕಡಿಮೆ. ಯಾವುದೇ ರೀತಿಯ ಅಸ್ಪಷ್ಟತೆಯನ್ನು ತಪ್ಪಿಸಲು, ಸಂಪೂರ್ಣ ಸಮಗ್ರತೆಯ ಜೀವನವನ್ನು ಜೀವಿಸಲು ಸಾಧ್ಯವೇ, ಉದಾಹರಣೆಗೆ ತೆರಿಗೆ ಪಾವತಿಯೊಂದಿಗೆ? ಉದ್ಯಮಗಳಿಗೆ ಹಣಕಾಸು ಒದಗಿಸಲು ತೆರಿಗೆಗಳನ್ನು ಬಳಸಲಾಗುತ್ತಿದೆ ಎಂದು ನಾವು ನಂಬಿದರೆ, ಅದು ನಾಗರಿಕರ ಕರ್ತವ್ಯವನ್ನು ರಹಸ್ಯವಾಗಿ ತಪ್ಪಿಸಿಕೊಳ್ಳುವುದನ್ನು ಸಮರ್ಥಿಸಬಹುದೇ? ಅಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ನೀಡುವುದು ತುಂಬಾ ಕಷ್ಟ.
ಆದಾಗ್ಯೂ ಇಂದಿನ ಶುಭಸಂದೇಶದ ಅಧ್ಯಾಯದ ಸಾಮತಿಯ ವಚನಗಳಿಂದ ಪ್ರಾರಂಭವಾಗುವ ಗಮನಾರ್ಹವಾದ ಸಂಗತಿಯೆಂದರೆ, ತನ್ನ ಧಣಿಯು ವಜಾಗೊಳಿಸಲಿರುವ ಉದ್ಯೋಗದಾತರಿಂದ ಪ್ರಶಂಸಿಸಲ್ಪಡುವ ಒಂದು ಚತುರ ವ್ಯಾಪಾರದ ಅಭ್ಯಾಸವನ್ನು ಸೂಚಿಸುತ್ತದೆ. ನಾವು ವಿವರಗಳ ಬಗ್ಗೆ ಹೆಚ್ಚು ಗಮನ ಹರಿಸಿದರೆ, ನಾವು ಗೊಂದಲಕ್ಕೊಳಗಾಗಬಹುದು. ಪ್ರಭುವು ನಮಗೆ ನಿಜವಾಗಿ ಏನು ಮಾಡಬೇಕೆಂದು ಹೇಳುತ್ತಿದ್ದಾರೆ? ಮೊದಲನೆಯವರಾಗಲು ಸಾಧ್ಯವಾಗುವಂತದ್ದನ್ನೆಲ್ಲಾ ಮಾಡುವುದು. ಮೇಸ್ತ್ರಿಯ ಅಥವಾ ಧನಿಕನ ಪ್ರೇರಣೆ ಸಂಪೂರ್ಣವಾಗಿ ಸ್ವಾರ್ಥಿಯಾಗಿದೆ, ಅದು ಆತನ ಉದ್ಯೋಗದಾತರಿಗೆ ಆರಂಭಿಕ ಪಾವತಿಯ ಪರಿಣಾಮವು ಅವರ ಬೀರಬಹುದಾದರೂ ಸಹ. ಉದ್ಯೋಗದಾತರು ಸ್ವತಃ ಸಂಪೂರ್ಣವಾಗಿ ತಮ್ಮ ನಿಯಂತ್ರಣ ತಪ್ಪಿದ್ದಾರಾ?
ಈ ಎಲ್ಲಾ ಊಹಾಪೋಹಗಳು ಆಧ್ಯಾತ್ಮಿಕತೆಯಿಂದ ದೂರವಿದ್ದಂತೆ ತೋರುತ್ತದೆ, ನಿಸ್ಸಂದೇಹವಾಗಿ ನೈಜ ಪ್ರಪಂಚ ಎಂದು ಕರೆಯಲ್ಪಡುವ ವಿಷಯಕ್ಕೆ ಸಂಬಂಧಿಸಿವೆ. ಯೇಸು ಈ ಸಾಮತಿಯನ್ನು, ಚತುರ, ಅವಕಾಶವಾದಿ, ಸಮಯಸಾಧಕ ಮತ್ತು ಈಗ ವಜಾಗೊಳಿಸಲ್ಪಟ್ಟ ಉದ್ಯೋಗದಾತರಿಗೆ /ಈ ಲೋಕದ ಪುತ್ರರಲ್ಲಿ ಒಬ್ಬನು ಮತ್ತು ಲೋಕೇತರ ಬೆಳಕಿನ ಪುತ್ರರ ನಡುವಿನ ವ್ಯತ್ಯಾಸವನ್ನು ತೋರ್ಪಡಿಸುತ್ತಾ ಮುಕ್ತಾಯಗೊಳಿಸುತ್ತಾನೆ. ನೀವು ನಿಮ್ಮನ್ನು ಯಾವ ವರ್ಗಕ್ಕೆ ಸೇರಿಸಿಕೊಳ್ಳುತ್ತೀರಿ? ಪ್ರಭುವು ನಿಮ್ಮನ್ನು ಬೆಳಕಿಗೆ ಸೇರಿದವರಾಗಿರಲು ಒತ್ತಾಯಿಸುತ್ತಿದ್ದರೆ, "ಅನೀತಿವಂತ ಧನಿಕನ ಮೂಲಕ ನಿಮಗಾಗಿ ಸ್ನೇಹಿತರನ್ನು ಮಾಡಿಕೊಳ್ಳುತ್ತೀರ ಎಂಬ ದುರ್ಧನದ ಹೇಳಿಕೆಯನ್ನು ಏಕೆ ಸೇರಿಸುತ್ತಾರೆ?
ಯೇಸುವಿನ ಸಾಮತಿಗಳನ್ನು ಎಂದಿಗೂ ಮೇಲ್ನೋಟಕ್ಕೆ ಕಂಡುಬರುವುದಿಲ್ಲ ಮತ್ತು ಅವುಗಳನ್ನು ಸರಳ ರೀತಿಯಲ್ಲಿ ವಿವರಿಸುವುದೇ ಅಪರೂಪ. ಅವುಗಳಿಗೆ ನಮ್ಮ ಕಡೆಯಿಂದ ಬೇಕಾಗಿರುವುದು ಪ್ರಾರ್ಥನಾಪೂರ್ವಕ ಮತ್ತು ಧ್ಯಾನಶೀಲತೆಯ ಒಳನೋಟದ ಅಗತ್ಯವಿರುತ್ತದೆ ಮತ್ತು ಬಹುಶಃ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದರ ಕುರಿತು ವಿವರಿಸಲು ಅಥವಾ ಅರ್ಥೈಸುವ ವಿಧವು ವಿಭಿನ್ನವಾಗಿರಬಹುದು. ಇಂದು ನೀವು ದೇವರ ವಾಕ್ಯದಿಂದ ನೇರವಾದ ಸಂದೇಶವನ್ನು ಪಡೆಯಲು ಬಯಸಿದರೆ, ಪ್ರವಾದಿಗಳಲ್ಲಿ ಮೊದಲನೆಯವರಾದ ಆಮೋಸರು ಬರೆದ ಮೊದಲ ವಾಚನದ ನುಡಿಗಳನ್ನು ಗಮನಿಸಿರಿ. ಬಡವರು ಮತ್ತು ದೀನದಲಿತರ ರಕ್ಷಣೆಗಾಗಿ, ಅವರು ಭ್ರಷ್ಟ ಸಂಪತ್ತು ಸಂಗ್ರಹಣೆ ಮತ್ತು ಮಾರುಕಟ್ಟೆಗಳಲ್ಲಿ ನಡೆಯುವ ಅನಾಗರೀಕತೆಯನ್ನು ತೀವ್ರವಾಗಿ ಖಂಡಿಸುತ್ತಾರೆ. ಅವರು 2800 ವರ್ಷಗಳ ಹಿಂದೆ ಬರೆತ್ತಿದ್ದರೂ ಸಹ, ಈಗಿನ ಪ್ರಸ್ತುತ ಕಾಲಕ್ಕೆ ಹೋಲಿಸಿದರೆ, ಇದದರಲ್ಲಿ ಬಹಳಷ್ಟು ಬದಲಾಗಿದೆಯೇ? ಆದ್ದರಿಂದ ದೇವರು ಮತ್ತು ಧನಕ್ಕೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ದೇವರಿಗೆ ನಾವು ನೀಡುಬೇಕಾದ ಪ್ರಾಮುಖ್ಯತೆಯನ್ನು ಅರಿತುಕೊಂಡು, ದೇವರಿಗೆ ವಿಧೇಯರಾಗಿ ನಡೆಯಲು ಇಂದಿನ ಶುಭಸಂದೇಶವು ನಮಗೆ ಕರೆ ನೀಡುತ್ತಿದೆ.