Flash mob against abortion law Flash mob against abortion law  (ANSA)

ಗರ್ಭಪಾತ, ದಯಾಮರಣ ಚರ್ಚೆಗಳ ನಡುವೆ ಕೊರಿಯಾದ ಧರ್ಮಾಧ್ಯಕ್ಷರುಗಳು ಪ್ರೊ-ಲೈಫ್ ಚಳುವಳಿಯನ್ನು ಪುನರಾರಂಭಿಸಿದ್ದಾರೆ

ಗರ್ಭಪಾತದ ಕುರಿತಾದ ಪ್ರಸ್ತಾವಿತ ಶಾಸಕಾಂಗ ಬದಲಾವಣೆಗಳು ಮತ್ತು ದಯಾಮರಣಕ್ಕೆ ಹೆಚ್ಚುತ್ತಿರುವ ಕರೆಗಳಿಗೆ ಧರ್ಮಾಧ್ಯಕ್ಷರುಗಳು ಮತ್ತು ಸಂಸ್ಥೆಗಳು ವಿರೋಧವನ್ನು ತೀವ್ರಗೊಳಿಸುತ್ತಿರುವುದರಿಂದ ದಕ್ಷಿಣ ಕೊರಿಯಾದ ಕಥೋಲಿಕ ಧರ್ಮಸಭೆಯು ದೇಶಾದ್ಯಂತ ಪ್ರೊ-ಲೈಫ್ ಚಳುವಳಿಯನ್ನು ಪುನರಾರಂಭಿಸಲು ಸಜ್ಜಾಗಿದೆ.

ಲಿಕಾಸ್‌ ಸುದ್ದಿ

ಕೊರಿಯದ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಕುಟುಂಬ ಮತ್ತು ಜೀವನ ಸಮಿತಿಯ ಅಧ್ಯಕ್ಷರಾದ ಜೆಜುವಿನ ಧರ್ಮಾಧ್ಯಕ್ಷರಾದ ಮೂನ್ ಚಾಂಗ್-ವೂರವರು, ಜೀವನವನ್ನು ಅದರ ಆರಂಭದಿಂದ ಅದರ ನೈಸರ್ಗಿಕ ಅಂತ್ಯದವರೆಗೆ ರಕ್ಷಿಸುವ ಧ್ಯೇಯ ಮತ್ತು ದೈವಕರೆಯ ಅರ್ಥವನ್ನು ಪುನರುಜ್ಜೀವನಗೊಳಿಸಲು ಮತ್ತು ಪ್ರವಾದಿಯ ಧ್ವನಿಯನ್ನು ಎತ್ತಲು ಅಭಿಯಾನವನ್ನು ವಿಸ್ತರಿಸುವ ಯೋಜನೆಗಳನ್ನು ಘೋಷಿಸಿದರು.

ವ್ಯಾಟಿಕನ್‌ನ ಫೈಡ್ಸ್ ಸುದ್ದಿಯು ಏಜೆನ್ಸಿಯ ವರದಿಯ ಪ್ರಕಾರ, ಈ ಉಪಕ್ರಮವು ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಕ್ರಿಯೆಗೆ ಮಾನವ ಜೀವನದ ಮೇಲಿನ ಅಳಿಸಲಾಗದ ಗೌರವವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಮಟ್ಟದಲ್ಲಿ ಕಲ್ಪಿಸಲಾದ ಈ ಆಂದೋಲನವು, ಅಗತ್ಯವಿರುವ ತಾಯಂದಿರಿಗೆ ಆರೈಕೆ ಮತ್ತು ಬೆಂಬಲವನ್ನು ಒದಗಿಸುವ "ಜನ್ಮತಾಳದ ಕೂಸುಗಳ ಜೀವನದ ಯೋಜನೆ" ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಕಾಲತ್ತುಗಳ ಮೂಲಕ ಜೀವನ ಸಂಸ್ಕೃತಿಯನ್ನು ಉತ್ತೇಜಿಸುವ "ಜೀವನ 31" ನಂತಹ ವಿವಿಧ ಪ್ರಾದೇಶಿಕ ಉಪಕ್ರಮಗಳನ್ನು ಸಂಘಟಿಸುವ ಗುರಿಯನ್ನು ಹೊಂದಿದೆ.

\ಆಗಸ್ಟ್ 26 ರಂದು, ಧರ್ಮಾಧ್ಯಕ್ಷರಾದ ಮೂನ್ ರವರು, ಧರ್ಮಾಧ್ಯಕ್ಷರುಗಳ ಸಮ್ಮೇಳನದ ಜೈವಿಕ ನೀತಿಶಾಸ್ತ್ರ ಸಮಿತಿ ಮತ್ತು ಕಥೋಲಿಕ ಜೈವಿಕ ನೀತಿಶಾಸ್ತ್ರ ಸಂಶೋಧನಾ ಸಂಸ್ಥೆ ಸೇರಿದಂತೆ ಕಥೋಲಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ, ತಾಯಂದಿರು ಮತ್ತು ಮಕ್ಕಳ ಆರೋಗ್ಯ ಕಾಯ್ದೆಗೆ ತಿದ್ದುಪಡಿಗಳನ್ನು ಚರ್ಚಿಸಲು ರಾಷ್ಟ್ರೀಯ ಸಭೆಯ ಆರೋಗ್ಯ ಸಮಿತಿಯನ್ನು ಭೇಟಿಯಾದರು.

ಕೊರಿಯಾದ ಪ್ರಜಾಪ್ರಭುತ್ವ ಪಕ್ಷದ 11 ಸದಸ್ಯರ ಬೆಂಬಲದೊಂದಿಗೆ ಈ ಮಸೂದೆಯನ್ನು ಮಂಡಿಸಲಾಗಿದ್ದು, ಗರ್ಭಪಾತವನ್ನು ಅಸಂವಿಧಾನಿಕ ಎಂದು ಘೋಷಿಸಿದ 2019ರ ಸಾಂವಿಧಾನಿಕ ನ್ಯಾಯಾಲಯದ ತೀರ್ಪಿನಿಂದ ಉಳಿದಿರುವ ಕಾನೂನು ಅಂತರವನ್ನು ನಿವಾರಿಸಲು ಪ್ರಯತ್ನಿಸಲಾಗಿದೆ.

ಈ ತಿದ್ದುಪಡಿಯನ್ನು ಅಂಗೀಕರಿಸಿದರೆ, ಭ್ರೂಣವು ಗರ್ಭಾಶಯದ ಹೊರಗೆ ಬದುಕಬಲ್ಲದ್ದಾಗಲೂ ಗರ್ಭಪಾತಕ್ಕೆ ಅವಕಾಶ ನೀಡುತ್ತದೆ ಮತ್ತು ಗರ್ಭಧಾರಣೆಯ ಸ್ವಯಂಪ್ರೇರಿತ ಮುಕ್ತಾಯದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತದೆ ಎಂದು ಧರ್ಮಾಧ್ಯಕ್ಷರುಗಳು ಎಚ್ಚರಿಸಿದ್ದಾರೆ. ಅಂತಹ ಕ್ರಮಗಳು "ಅನಿಯಂತ್ರಿತ ಗರ್ಭಪಾತ"ಕ್ಕೆ ಅವಕಾಶ ನೀಡುತ್ತಿವೆ ಎಂದು ಧರ್ಮಸಭೆಯು ಹೇಳಿದೆ, ಇದು ಭ್ರೂಣವು ಬದುಕುವ ಹಕ್ಕನ್ನು ಪರಿಣಾಮಕಾರಿಯಾಗಿ ಕಸಿದುಕೊಳ್ಳುತ್ತದೆ.

ಸಿಯೋಲ್ ಮಹಾಧರ್ಮಕ್ಷೇತ್ರದ ಪ್ರೊ-ಲೈಫ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಧರ್ಮಗುರು ಲಿಯೋ ಓ ಸಿಯೋಕ್-ಜುನ್ ರವರು, ಈ ವಿಷಯದ ಬಗ್ಗೆ ಸಾರ್ವಜನಿಕ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು.

ಈ ವಿಷಯದ ಬಗ್ಗೆ ಹಿಂದೆ ಹಲವು ಚರ್ಚೆಗಳು ನಡೆದಿವೆ, ಗರ್ಭಾವಸ್ಥೆಯ ವಯಸ್ಸನ್ನು ಲೆಕ್ಕಿಸದೆ ನಾವು ಗರ್ಭಪಾತವನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

ಆಗಸ್ಟ್ 28ರಂದು ರಾಷ್ಟ್ರೀಯ ಸಭೆಯಲ್ಲಿ ನಡೆದ ವೇದಿಕೆಯಲ್ಲಿ ಸಿಯೋಲ್‌ನ ಸಹಾಯಕ ಧರ್ಮಾಧ್ಕ್ಷಕ್ಷರು ಮತ್ತು ಬಯೋಎಥಿಕ್ಸ್ ಸಮಿತಿಯ ಅಧ್ಯಕ್ಷರಾದ ಧರ್ಮಾಧ್ಕ್ಷಕ್ಷರು ಕು ಯೂ-ಬಿರವರು ದಯಾಮರಣ ಮತ್ತು ಆತ್ಮಹತ್ಯೆಗೆ ಸಹಾಯ ಮಾಡುವುದರ ಕುರಿತು ಮಾತನಾಡಿದರು, ಈ ಚರ್ಚೆಯು ಜೀವನದ ಅಂತ್ಯದ ಸಮಸ್ಯೆಗಳಿಗೂ ವಿಸ್ತರಿಸಿದೆ. ನಮ್ಮ ಸಮಾಜವು ದಕ್ಷತೆ ಮತ್ತು ಉತ್ಪಾದಕತೆಗೆ ಮಾತ್ರ ಒತ್ತು ನೀಡಿದಾಗ, ರೋಗಿಗಳ ಆರೈಕೆಯನ್ನು ವ್ಯರ್ಥ ಮತ್ತು ನಿಷ್ಪ್ರಯೋಜಕ ಚಟುವಟಿಕೆಯಾಗಿ ನೋಡಲಾಗುತ್ತದೆ, ಇದು ರೋಗಿಗಳನ್ನು ಅವರ ಸಾವಿಗೆ ದೂಡುತ್ತದೆ.

ಸಮಾಜದ ಮಾನವೀಯತೆಯನ್ನು ಅದು ರೋಗಿಗಳು ಮತ್ತು ದುರ್ಬಲರನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದರ ಮೂಲಕ ಅಳೆಯಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು, ದುರ್ಬಲ ರೋಗಿಗಳನ್ನು ನಿರ್ಲಕ್ಷಿಸುವುದು ಅಥವಾ ಸಾವಿನತ್ತ ಒತ್ತಡ ಹೇರುವುದು ಸಮಾಜದ ನೈತಿಕ ಅಡಿಪಾಯವನ್ನು ಕಸಿದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
 

29 ಆಗಸ್ಟ್ 2025, 18:52