ಹುಡುಕಿ

UKRAINE-CRISIS/GERMANY-TRAFFICKING UKRAINE-CRISIS/GERMANY-TRAFFICKING 

ವಿಯೆಟ್ನಾಂನ ಕಾರಿತಾಸ್: ಭವಿಷ್ಯದ ಪೀಳಿಗೆಯನ್ನು ಮಾನವ ಕಳ್ಳಸಾಗಣೆಯಿಂದ ರಕ್ಷಿಸುವುದು

ವಿಯೆಟ್ನಾಂ ಅತಿ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿರುವುದರಿಂದ, ಕಾರಿತಾಸ್ ಧರ್ಮಕ್ಷೇತ್ರಗಳಲ್ಲಿ ಯುವಜನತಗೆ ಮಾರ್ಗದರ್ಶನ ನೀಡುವ ಮೂಲಕ ಹೆಚ್ಚಿನ ಪ್ರಕರಣಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.

ಕೀಲ್ಸ್ ಗುಸ್ಸಿ

2008 ಮತ್ತು 2023ರ ನಡುವೆ, ಜಾಗತಿಕವಾಗಿ ಮಾನವ ಕಳ್ಳಸಾಗಣೆಗೆ ಬಲಿಯಾದವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದ್ದು, 30,000 ದಿಂದ ಬಹುತೇಕ 134,000ಕ್ಕೆ ಏರಿದೆ ಎಂದು ಈ ವರ್ಷದ ಜೂನ್‌ನಲ್ಲಿ ಸ್ಟ್ಯಾಟಿಸ್ಟಾ ವರದಿ ಮಾಡಿದೆ. ಈ ತೀವ್ರ ಹೆಚ್ಚಳವನ್ನು ಕಾಣಬಹುದಾದ ಒಂದು ದೇಶ ವಿಯೆಟ್ನಾಂ ಎಂದು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆ ವಿವರಿಸಿದೆ.

ಇತ್ತೀಚಿನ ದಿನಗಳಲ್ಲಿ, ಕಳ್ಳಸಾಗಣೆದಾರರು ಸಂತ್ರಸ್ತರುಗಳನ್ನು ಆಮಿಷವೊಡ್ಡಲು ಮತ್ತು ವಂಚಿಸಲು ದೈಹಿಕವಾಗಿ ಭೇಟಿಯಾಗಬೇಕಾಗಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆಗಳು ಅಪರಾಧಿಗಳಿಗೆ ಅನುಕೂಲಕರವಾದ ವೇದಿಕೆಯಾಗಿ ಮಾರ್ಪಟ್ಟಿವೆ. ಆನ್‌ಲೈನ್ ವಂಚನೆಗಳಿಂದಾಗಿ ಅನೇಕ ವಿಯೆಟ್ನಾಮೀಸನ ಜನರು ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ಚೀನಾದಂತಹ ನೆರೆಯ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ, ಇದು ರಾಷ್ಟ್ರೀಯ ಬಿಕ್ಕಟ್ಟು ಮತ್ತು ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡಿದೆ.

ಭವಿಷ್ಯದ ಪೀಳಿಗೆಯನ್ನು ರಕ್ಷಿಸುವುದು
ಹಂಗ್ ಹೋವಾದ ಕಾರಿತಾಸ್ ಧರ್ಮಕ್ಷೇತ್ರದಲ್ಲಿ ಸಿಸ್ಟರ್ ತೆರೇಸಾ ಫಾಮ್ ನಿನ್ಹ್ ಖಾನ್ ಹೌ, 100ಕ್ಕೂ ಹೆಚ್ಚು ಹದಿಹರೆಯದವರನ್ನು ಭೇಟಿಯಾಗಿ ವಂಚನೆಗಳನ್ನು ಗುರುತಿಸಲು ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಜಾಗೃತರಾಗಲು ಅರಿವು ಕಲಿಸಿದರು. ಟಿಯೆನ್ ನಾನ್ ಧರ್ಮಕೇಂದ್ರದಲ್ಲಿ - ಇನ್ನೂ ಭತ್ತದ ಕೃಷಿಗೆ ಮೀಸಲಾಗಿರುವ ದೇಶದ ಒಂದು ಪ್ರದೇಶ - ಮಾಹಿತಿಯ ಪ್ರವೇಶದ ಕೊರತೆಯಿಂದಾಗಿ ಸುರಕ್ಷಿತ ವಲಸೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಅರಿವು ಸೀಮಿತವಾಗಿದೆ.

ಬದಲಾವಣೆಯತ್ತ ಕಾರ್ಯನಿರ್ವಹಣೆ
2024ರಲ್ಲಿ ಮಾತ್ರ, ಕಾನೂನು ಜಾರಿ ಸಂಸ್ಥೆಗಳು ಸುಮಾರು 163 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆಹಚ್ಚಿ ತನಿಖೆ ನಡೆಸಿವೆ ಮತ್ತು 2025 ರ ಮೊದಲಾರ್ಧದಲ್ಲಿ 120 ಪ್ರಕರಣಗಳು ದಾಖಲಾಗಿವೆ.

ಸಾಮಾಜಿಕ ಮಾಧ್ಯಮದಲ್ಲಿ ಶೇ.73ರಷ್ಟು ಜನಸಂಖ್ಯೆಯೊಂದಿಗೆ, ವಿಯೆಟ್ನಾಂ ಅತಿ ಹೆಚ್ಚು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ - 72 ಮಿಲಿಯನ್‌ಗಿಂತಲೂ ಹೆಚ್ಚು ಜನರು. ಫೈಡ್ಸ್ ವರದಿಯ ಪ್ರಕಾರ, ಶೇ.17 ರಷ್ಟು ಬಳಕೆದಾರರು 13 ರಿಂದ 24 ವರ್ಷದೊಳಗಿನವರು. ವಿಯೆಟ್ನಾಂನ ಸುಮಾರು 24.7 ಮಿಲಿಯನ್ ಮಕ್ಕಳಲ್ಲಿ, ಸುಮಾರು 97% ಮಕ್ಕಳು ಪ್ರತಿದಿನ ಸುಮಾರು 5 ರಿಂದ 7 ಗಂಟೆಗಳ ಕಾಲ ಇಂಟರ್ನೆಟ್ ಬಳಸುತ್ತಾರೆ.

ಮಾರ್ಗದರ್ಶನ ಮತ್ತು ವಿಶ್ವಾಸಾರ್ಹ ಮಾಹಿತಿಯಿಲ್ಲದೆ, ಈ ಹದಿಹರೆಯದವರು ಮತ್ತು ಯುವ ವಯಸ್ಕರು ನಿರಂತರವಾಗಿ ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮದ ಜಗತ್ತಿನಲ್ಲಿ ಆನ್‌ಲೈನ್ ವಂಚನೆಗಳು ಮತ್ತು ಮಾನವ ಕಳ್ಳಸಾಗಣೆಯಿಂದ ಹೆಚ್ಚುತ್ತಿರುವ ಅಪಾಯಕ್ಕೆ ಗುರಿಯಾಗುತ್ತಿದ್ದಾರೆ.
 

08 ಆಗಸ್ಟ್ 2025, 20:00