ಹುಡುಕಿ

Israel countinues airstrikes on Iran Israel countinues airstrikes on Iran  (ANSA)

ಇರಾನಿನ ಕಾರ್ಡಿನಲ್ ಮ್ಯಾಥ್ಯೂ: ಶಾಂತಿಯ ಮಾತುಕತೆಗಳು ಪುನರಾರಂಭಗೊಳ್ಳಲಿ ಎಂದು ಪ್ರಾರ್ಥಿಸೋಣ

ಲತೀನ್‌ ಟೆಹ್ರಾನ್-ಇಸ್ಫಹಾನ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಡೊಮಿನಿಕ್ ಜೋಸೆಫ್ ಮ್ಯಾಥ್ಯೂರವರು ಇಸ್ರಯೇಲ್ ಮತ್ತು ಅವರು ವಾಸಿಸುವ ದೇಶದ ನಡುವೆ ಭುಗಿಲೆದ್ದಿರುವ ಸಂಘರ್ಷದ ಬಗ್ಗೆ ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾನು ಸ್ಥಳಾಂತರಗೊಂಡ ವ್ಯಕ್ತಿಗಳು, ಸತ್ತವರನ್ನು, ಗಾಯಗೊಂಡವರು ಅನುಭವಿಸುತ್ತಿರುವ ವೇದನೆಗಳನ್ನು ಎದುರಿಸುತ್ತಿದ್ದೇನೆ. ಎರಡೂ ರಾಷ್ಟ್ರಗಳಲ್ಲಿ, ಅನೇಕ ಸಂತ್ರಸ್ತರುಗಳಿದ್ದಾರೆ. ಇದು ವೈಮಾನಿಕ ಯುದ್ಧವಾಗಿದ್ದು, ಅನೇಕರು ತಮ್ಮ ಮನೆಗಳನ್ನು ತೊರೆದು ಒಳನಾಡಿನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಮಾಡಿದೆ.

ಫೆಡೆರಿಕೊ ಪಿಯಾನಾ

"ಇಂದು ನಾನು ಮೇಲುಗೈ ಸಂತ್ರಸ್ತರುಗಳ ಸಮ್ಮುಖದಲ್ಲಿ ನನ್ನನ್ನು ಕಂಡುಕೊಳ್ಳುತ್ತೇನೆ: ಸ್ಥಳಾಂತರಗೊಂಡ ವ್ಯಕ್ತಿಗಳು, ಗಾಯಗೊಂಡವರು, ಸತ್ತವರು. ಎರಡೂ ರಾಷ್ಟ್ರಗಳಲ್ಲಿ ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಲ್ಲದ ಎರಡೂ ನಾಗರಿಕ ಸಂತ್ರಸ್ತರುಗಳಿದ್ದಾರೆ." ಲತೀನ್‌ ಭಾಷೆಯ ಟೆಹ್ರಾನ್-ಇಸ್ಫಹಾನ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಡೊಮಿನಿಕ್ ಜೋಸೆಫ್ ಮ್ಯಾಥ್ಯೂರವರು ಇರಾನ್ ರಾಜಧಾನಿಯಿಂದ ವ್ಯಾಟಿಕನ್ ಮಾಧ್ಯಮಕ್ಕೆ ಮಾತನಾಡುತ್ತಾ ಈ ವಿಷಯವನ್ನು ವ್ಯಕ್ತಪಡಿಸಿದರು. ಇದು ಭಾರೀ ಬಾಂಬ್ ದಾಳಿಗೆ ಗುರಿಯಾಗಿದ್ದು, ಹೆಚ್ಚಿನ ಒತ್ತಡದಲ್ಲಿದೆ.

ಯುದ್ಧದ ಆರನೇ ದಿನದಂದು ದುಃಖದಿಂದ, ಕಾರ್ಡಿನಲ್ ರವರು ನಗರದ 11ನೇ ಜಿಲ್ಲೆಯಲ್ಲಿ ತಂಗಿರುವ ಸ್ಥಳದಲ್ಲಿ, ಅಂತರರ್ಜಾಲದ ಸಂಪರ್ಕವನ್ನು ಇದೀಗ ಪುನಃಸ್ಥಾಪಿಸಲಾಗಿದೆ. ಸೂರ್ಯ ಬೆಳಗುತ್ತಿದ್ದಾನೆ, ಪಕ್ಷಿಗಳು ಹಾಡುತ್ತಿವೆ, ತಾಪಮಾನವು ಆಹ್ಲಾದಕರವಾಗಿದೆ ಎಂದು ಪರಿಗಣಿಸಿ ಮೋಸಗೊಳಿಸುವ ನೋಟವನ್ನು ಹಂಚಿಕೊಳ್ಳುತ್ತಾರೆ.

ಆದರೆ, ಅಷ್ಟರೊಳಗೆ ಇನ್ನೊಂದು ವಿಷಯವನ್ನು ಸ್ಪಷ್ಟಪಡಿಸುತ್ತಾರೆ ಅದೇನೆಂದರೆ, ಇದು ಕೇವಲ ಒಂದು ನೋಟ, ಏಕೆಂದರೆ ರಾತ್ರಿಯ ಸಮಯದಲ್ಲಿ ವಾಯು ರಕ್ಷಣಾ ಪಡೆಗಳು ಎಂದಿಗಿಂತಲೂ ಹೆಚ್ಚು ಸಕ್ರಿಯವಾಗಿರುತ್ತವೆ. ಒಂದು ರೀತಿಯಲ್ಲಿ, ಅದು ಧೈರ್ಯ ತುಂಬುವ ಸಂಗತಿ, ಏಕೆಂದರೆ ಇಲ್ಲಿ ಆಶ್ರಯ ಪಡೆಯಲು ಯಾವುದೇ ಆಶ್ರಯಗಳಿಲ್ಲ, ಅಥವಾ ಒಳಬರುವ ಕ್ಷಿಪಣಿಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಲು ಸೈರನ್‌ಗಳಿಲ್ಲ.

ಇದು ಎದುರಾಳಿ ಸೈನ್ಯಗಳಿಲ್ಲದ ಯುದ್ಧ ಎಂದು ಕಾರ್ಡಿನಲ್ ಮ್ಯಾಥ್ಯೂರವರು ವಿವರಿಸುತ್ತಾರೆ. ಅವರು ಸಂಪರ್ಕಕ್ಕೆ ಬರಲು ಯಾವುದೇ ಸಾಮಾನ್ಯ ಗಡಿಯಿಲ್ಲ, ಎಲ್ಲವೂ ವಾಯುಪ್ರದೇಶದಲ್ಲಿ ನಡೆಯುತ್ತಿದೆ, ಅಲ್ಲಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಘರ್ಷಣೆಗೊಳ್ಳುತ್ತವೆ. ಮೂಲಭೂತವಾಗಿ ಇತರ ರಾಷ್ಟ್ರಗಳ ವಾಯುಪ್ರದೇಶವನ್ನು ವ್ಯವಸ್ಥಿತವಾಗಿ ಉಲ್ಲಂಘಿಸುವ ಅಸಮಪಾರ್ಶ್ವದ ಸಂಘರ್ಷವೆಂದು ಹೇಳುತ್ತಾರೆ.

ಕಾರ್ಡಿನಲ್ ರವರು ಸ್ಥಳೀಯ ಸಮುದಾಯದ ಬಗ್ಗೆ ವಿವರವಾದ ಮತ್ತು ಹಿಂದೆ ವರದಿಯಾಗದ ಮಾಹಿತಿಯನ್ನು ಸಹ ಒದಗಿಸಿದರು, ಇದು ಪೀಡಿತ ಪ್ರದೇಶಗಳಲ್ಲಿ ಭಾಗಶಃ ಹಿಂದುಳಿದಿದೆ, ಆದರೆ ಅನೇಕರು ದೇಶದ ಸುರಕ್ಷಿತ ಭಾಗಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಪ್ರಾರ್ಥನೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು
"ನನ್ನ ಹೃದಯಾಳದ ಧನ್ಯವಾದಗಳು," ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ, ನೀವು ನಮಗಾಗಿ ಪ್ರಾರ್ಥಿಸಿರಿ. ತನ್ನ ರಕ್ತವನ್ನು ಚೆಲ್ಲುವ ಮೂಲಕ ವಿಶ್ವವನ್ನು ರಕ್ಷಿಸಿದ ಕ್ರಿಸ್ತರಲ್ಲಿ ಒಂದಾಗಿದ್ದೇವೆ ಎಂದು ಕಾರ್ಡಿನಲ್ ರವರು ಹೇಳುತ್ತಾರೆ.

ಕೊನೆಯದಾಗಿ, ಕಾರ್ಡಿನಲ್ ಮ್ಯಾಥ್ಯೂರವರು ಸಂತ ಪೌಲರು ಎಫೆಸದವರಿಗೆ ಬರೆದ ಪತ್ರವನ್ನು ನೆನಪಿಸಿಕೊಳ್ಳುತ್ತಾ "ಅದರಲ್ಲಿ ಯೇಸು 'ಇಬ್ಬರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾರೆ' ಎಂದು ಬರೆಯಲಾಗಿದೆ. ಅವರ ನಡುವಿನ ಪ್ರತ್ಯೇಕತೆಯ ಗೋಡೆಯನ್ನು, ಅಂದರೆ ನಮ್ಮ ನಡುವಿನ ದ್ವೇಷವನ್ನು ಕೆಡವಿದ್ದಾರೆ ಎನ್ನತ್ತಾ ಮುಕ್ತಾಯಗೊಳಿಸುತ್ತಾರೆ.
 

19 ಜೂನ್ 2025, 21:43