ಹುಡುಕಿ

Priests celebrating at the motherhouse next to the tomb of Saint Vincent de Paul - 400 anni Congregazione Missione Priests celebrating at the motherhouse next to the tomb of Saint Vincent de Paul - 400 anni Congregazione Missione  (Congregazione della Missione)

ಪ್ಯಾರಿಸ್‌ನಲ್ಲಿ ಧರ್ಮಪ್ರಚಾರಕರ ಸಭೆಯ 400ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ

ಸೇಂಟ್ ವಿನ್ಸೆಂಟ್ ಡಿ ಪಾಲ್ ಸ್ಥಾಪಿಸಿದ ಸಭೆಯ ಮಹೋತ್ಸವವನ್ನು ಆಚರಿಸಲು 20ಕ್ಕೂ ಹೆಚ್ಚು ಧರ್ಮಾಧ್ಯಕ್ಷರುಗಳು ಮತ್ತು 150ಕಾನ್ಫ್ರೆರ್ಸ್ ಗಳು ಒಟ್ಟುಗೂಡಿದರು. ಈ ಆಚರಣೆಯು ವಿನ್ಸೆಂಟಿಯದ ಧ್ಯೇಯದ ಆಧ್ಯಾತ್ಮಿಕ ಹೃದಯವಾದ ಮೈಸನ್ ಮೇರೆಯಲ್ಲಿ ನಡೆಯಿತು.

ವರದಿ

ಇಂದು ಬೆಳಿಗ್ಗೆ, ಸಂತ ಯುಸ್ಟಾಚೆರವರ ದೇವಾಲಯದಲ್ಲಿ ಮತ್ತು ಫ್ರಾನ್ಸ್‌ನ ವಿನ್ಸೆಂಟಿಯ ಸಭೆಯ ಕುಟುಂಬದ ಹಲವಾರು ಅನುಯಾಯಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ, ಪ್ಯಾರಿಸ್‌ನ ಸಹಾಯಕ ಧರ್ಮಾಧ್ಯಕ್ಷರಾದ ಎಮ್ಯಾನುಯೆಲ್ ಟೋಯಿಸ್ ರವರು 1625ರಲ್ಲಿ ಸೇಂಟ್ ವಿನ್ಸೆಂಟ್ ಡಿ ಪಾಲ್ ಸ್ಥಾಪಿಸಿದ ಧರ್ಮಪ್ರಚಾರಕರ ಸಭೆಯ ಸ್ಥಾಪನೆಯ 400ನೇ ವಾರ್ಷಿಕೋತ್ಸವಕ್ಕಾಗಿ ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮಗಳ ಸಮಾರೋಪವನ್ನು ಗುರುತಿಸುವ ಸಾಂಭ್ರಮಿಕ ದಿವ್ಯಬಲಿಪೂಜೆಯ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ 20 ಕ್ಕೂ ಹೆಚ್ಚು ಮಹಾಧರ್ಮಾಧ್ಯಕ್ಷರುಗಳು ಮತ್ತು ಧರ್ಮಾಧ್ಯಕ್ಷರುಗಳು, ವಿವಿಧ ದೇಶಗಳಿಂದ ಬಂದ 150 ವಿನ್ಸೆಂಟಿಯ ಸಭೆಯ ಧರ್ಮಪ್ರಚಾರಕರು ಸೇರಿಕೊಂಡರು.

"ಇದು ಅನುಗ್ರಹದ ಸಮಯವಾಗಿದೆ. ಈ ವಾರ್ಷಿಕೋತ್ಸವವು ಕೇವಲ ನೆನಪಿಗೆ ಮಾತ್ರವಲ್ಲ, ಇದು ನಮ್ಮ ಧರ್ಮಪ್ರಚಾರಕ ಸೇವೆಯಲ್ಲಿ ಮುಂದುವರಿಯಲು ನೀಡುತ್ತಿರುವ ಕರೆಯಾಗಿದೆ. ನಾವು ಯಾರೆಂದು ಮತ್ತು ನಾವು ಎಲ್ಲಿ, ಯಾವ ರೀತಿಯಲ್ಲಿ ಮುಂದುವರಿಯಬೇಕೆಂದು ಇದು ನಮಗೆ ನೆನಪಿಸುತ್ತದೆ" ಎಂದು ದಿವ್ಯಬಲಿಪೂಜೆಯ ನಂತರ ಈ ಸಭೆಯ ಪ್ರಧಾನ ಶ್ರೇಷ್ಠಗುರು ಫಾದರ್ ತೋಮಾಜ್ ಮಾವ್ರಿಕ್, ಸಿಎಂರವರು ಹೇಳಿದರು.

ಸಮಾರೋಪ ಆಚರಣೆಗೆ ಮುನ್ನ ಮೂರು ದಿನಗಳ ಸಿದ್ಧತೆ ನಡೆದಿತ್ತು. ಮೊದಲ ದಿನವು ಕಾನ್ಫ್ರೆರೆ ಧರ್ಮಾಧ್ಯಕ್ಷರುಗಳಿಗಾಗಿ ರಚನಾ ಅಧಿವೇಶನವನ್ನು ಒಳಗೊಂಡಿತ್ತು, ಪ್ಯಾರಿಸ್‌ನಲ್ಲಿರುವ ನೊಟ್ರೆ ಡೇಮ್ ಪ್ರಧಾನಾಲಯದಲ್ಲಿ ವೆಸ್ಪರ್ಸ್ ಆಚರಣೆಯೊಂದಿಗೆ ಕೊನೆಗೊಂಡಿತು. ಎರಡನೇ ದಿನ, ರೂ ಡು ಬಾಕ್‌ನಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಪರಮಪ್ರಸಾದದ ದಿವ್ಯ ಬಲಿಪೂಜೆಯ ಆಚರಣೆಯನ್ನು ಅರ್ಪಿಸಲಾಯಿತು. ಇದು ಕ್ಯಾಥರೀನ್ ಲೇಬೋರ್‌ಗೆ ಪೂಜ್ಯ ಕನ್ಯಾ ಮಾತೆಮೇರಿಯು ದರ್ಶನ ನೀಡಿದ ಸ್ಥಳ, ನಂತರ ಸಂತ ವಿನ್ಸೆಂಟ್ ರವರ ಹೃದಯವನ್ನು ಹೊಂದಿರುವ ಅವಶೇಷವನ್ನು ಮೆರವಣಿಗೆಯಲ್ಲಿ ರೂ ಡಿ ಸೆವ್ರೆಸ್‌ನಲ್ಲಿರುವ ವಿನ್ಸೆಂಟಿಯನ್ ಮದರ್ ಹೌಸ್‌ಗೆ ಕೊಂಡೊಯ್ಯಲಾಯಿತು.

ಮೂರನೇ ದಿನವು ಮಿಷನ್‌ನ ಮೊದಲ ಪ್ರಬೋಧನೆಯ ಸ್ಥಳವಾದ ಗ್ಯಾನೆಸ್-ಫೋಲೆವಿಲ್ಲೆಯಲ್ಲಿ ನಡೆಯಿತು, ಅಲ್ಲಿ ಧರ್ಮಪ್ರಚಾರಕರು ಪರಮಪ್ರಸಾದ ಮತ್ತು ಪ್ರಾಯಶ್ಚಿತ್ತ ವಿಧಿಯನ್ನು ಆಚರಿಸಿದರು, ಅಲ್ಲಿ ವಿನ್ಸೆಂಟ್ ಡಿ ಪಾಲ್ ಬಡ ಗ್ರಾಮೀಣ ಗ್ರಾಮಸ್ಥರೊಂದಿಗೆ ಸಾಮಾನ್ಯ ತಪ್ಪೊಪ್ಪಿಗೆಯ ಸಂಸ್ಕಾರದ ಬಗ್ಗೆ ಮಾತನಾಡಿದರು.

ವಿಶ್ವಗುರು ಫ್ರಾನ್ಸಿಸ್ ರವರ ಸ್ಮರಣೆ
ಆಚರಣೆಯ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿವಿಶ್ವಗುರು ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವುದು ಒಂದು, ಅವರು ಕಳೆದ ಡಿಸೆಂಬರ್‌ನಲ್ಲಿ ಸಭೆಯ ಪ್ರಧಾನ ಶ್ರೇಷ್ಠಗುರು ಫಾದರ್ ತೋಮಾಜ್ ಮಾವ್ರಿಕ್, ಸಿಎಂ ಅವರಿಗೆ ಸಂದೇಶ ಕಳುಹಿಸಿದ್ದರು. ಅದರಲ್ಲಿ, ಅವರು ವಿನ್ಸೆಂಟಿಯ ಸಭೆಯ ಕುಟುಂಬಕ್ಕೆ ತಮ್ಮ ನಿಕಟತೆಯನ್ನು ವ್ಯಕ್ತಪಡಿಸಿದರು ಮತ್ತು ವಾರ್ಷಿಕೋತ್ಸವವು ಅವರ ಧರ್ಮಪ್ರಚಾರಕ ಬದ್ಧತೆಯನ್ನು ನವೀಕರಿಸಲು ಒಂದು ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

"ಈ ಮಹತ್ವದ ವಾರ್ಷಿಕೋತ್ಸವವು ಧರ್ಮಪ್ರಚಾರಕರ ಶಿಷ್ಯತ್ವದ ದೃಷ್ಟಿಕೋನಕ್ಕೆ ಹೆಚ್ಚಿನ ಸಂತೋಷ ಮತ್ತು ನವೀಕೃತ ನಿಷ್ಠೆಯ ಸಂದರ್ಭವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಇದು ಬಡವರ ಮೇಲಿನ ಕ್ರಿಸ್ತರ ಆದ್ಯತೆಯ ಪ್ರೀತಿಯ ಅನುಕರಣೆಯಲ್ಲಿ ನೆಲೆಗೊಂಡಿದೆ" ಎಂದು ಪೂಜ್ಯ ತಂದೆ ಬರೆದ ಪತ್ರವು ಧರ್ಮಪ್ರಚಾರಕರ ಸಭೆಯ ಸುಮಾರು 3,000 ಸದಸ್ಯರಲ್ಲಿ ಇಂದಿಗೂ ಪ್ರತಿಧ್ವನಿಸುತ್ತಿದೆ, ಅವರು 100 ದೇಶಗಳಲ್ಲಿ ಬಡವರಿಗೆ ಸುವಾರ್ತಾಬೋಧನೆ ಮತ್ತು ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ.

ಈ 400ನೇ ವಾರ್ಷಿಕೋತ್ಸವದೊಂದಿಗೆ, ಧರ್ಮಪ್ರಚಾರಕರ ಸೇವೆಯ ಸಭೆಯು ಸಂತ ವಿನ್ಸೆಂಟ್ ಡಿ ಪಾಲ್ ರವರ ದೃಷ್ಟಿಕೋನದಿಂದ ಪ್ರೇರಿತವಾಗಿ ಸುವಾರ್ತೆ ಮತ್ತು ಬಡವರ ಸೇವೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ವಿಶ್ವದಾದ್ಯಂತದ ಸಾವಿರಾರು ವಿನ್ಸೆಂಟಿಯ ಸಭೆಯ ಕುಟುಂಬದ ಸದಸ್ಯರು ಮತ್ತು ವಿಶ್ವಾಸಿಗಳು, ಅದೇ ಆಧ್ಯಾತ್ಮಿಕತೆಯಿಂದ ಒಂದಾಗಿ, ನೇರ ಪ್ರಸಾರದ ಮೂಲಕ ಆಚರಣೆಗಳನ್ನು ವೀಕ್ಷಿಸಿದರು.
 

01 ಮೇ 2025, 13:05