Robert Francis Prevost - Pope Leo XIV Robert Francis Prevost - Pope Leo XIV  (ANSA)

ವಿಶ್ವಗುರು ಹದಿನಾಲ್ಕನೇ ಲಿಯೋರವರ ಆಯ್ಕೆಗೆ ಕಥೋಲಿಕ ನಾಯಕರ ಪ್ರತಿಕ್ರಿಯೆ

ವಿಶ್ವಾದ್ಯಂತ ಧರ್ಮಸಭೆಯ ನಾಯಕರು ಮತ್ತು ಕಥೋಲಿಕ ಸಂಸ್ಥೆಗಳು ವಿಶ್ವಗುರು ಹದಿನಾಲ್ಕನೇ ಲಿಯೋರವರ ಆಯ್ಕೆಯನ್ನು ಸಂತೋಷದಿಂದ ಸ್ವಾಗತಿಸಿವೆ, ಶಾಂತಿ, ನಮ್ರತೆ ಮತ್ತು ದುರ್ಬಲರ ಬಗ್ಗೆ ಅವರ ಕಾಳಜಿಯನ್ನು ಎತ್ತಿ ತೋರಿಸಿವೆ.

ಫ್ರಾನ್ಸೆಸ್ಕಾ ಮೆರ್ಲೊ

ವಿಶ್ವಗುರು ಹದಿನಾಲ್ಕನೇಯ ಲಿಯೋರವರನ್ನು 267ನೇ ವಿಶ್ವಗುರುವಾಗಿ ಆಯ್ಕೆ ಮಾಡಿದ ಘೋಷಣೆಯ ನಂತರದ ಗಂಟೆಗಳಲ್ಲಿ, ಪ್ರಪಂಚದಾದ್ಯಂತದ ಧರ್ಮಸಭೆಯ ನಾಯಕರು ಮತ್ತು ಕಥೋಲಿಕ ಸಂಸ್ಥೆಗಳು ಪೇತ್ರರವರ ನೂತನ ಉತ್ತರಾಧಿಕಾರಿಗೆ ತಮ್ಮ ಸಂತೋಷ, ಭರವಸೆ ಮತ್ತು ಪ್ರಾರ್ಥನಾಪೂರ್ವಕ ಬೆಂಬಲವನ್ನು ವ್ಯಕ್ತಪಡಿಸಿವೆ.

ದಕ್ಷಿಣ ಕೊರಿಯಾ
ಕೊರಿಯಾದ ಪರ್ಯಾಯ ದ್ವೀಪದಿಂದ, ಸಿಯೋಲ್‌ನ ಒ.ಸಿ.ಡಿ. ಮಹಾಧರ್ಮಾಧ್ಯಕ್ಷರಾದ ಪೀಟರ್ ಸೂನ್-ಟೈಕ್ ಚುಂಗ್ ರವರು ವಿಶ್ವಗುರುವಿನ ಆಯ್ಕೆಯನ್ನು "ದೇವರಿಗೆ ಆಳವಾದ ಕೃತಜ್ಞತೆಯೊಂದಿಗೆ" ಸ್ವಾಗತಿಸಿದರು. "ನಮ್ರತೆ ಮತ್ತು ಪ್ರೀತಿ, ಸತ್ಯ ಹಾಗೂ ನ್ಯಾಯ ಪ್ರಜ್ವಲಿಸುವ ಬೆಳಕು" ಧರ್ಮಸಭೆಯನ್ನು ಮಾರ್ಗದರ್ಶಿಸುವ ಮೂಲಕ ಮುನ್ನಡೆಸುವ ಕ್ಷಣವಾಗಿದೆ ಎಂದರು. ಲಿಯೋ" ಎಂಬ ಹೆಸರಿನ ಮಹತ್ವವನ್ನು ಅವರ ಪರಂಪರೆಯನ್ನು ಮತ್ತು ಕಥೋಲಿಕ ಸಾಮಾಜಿಕ ಬೋಧನೆಗೆ ಅವರು ನೀಡಿದ ಒತ್ತು, ವಿಶೇಷವಾಗಿ ಆಧುನಿಕತೆ, ತಂತ್ರಜ್ಞಾನ ಮತ್ತು ಮಾನವ ಘನತೆಯ ಸವಾಲುಗಳನ್ನು ನೆನಪಿಸಿಕೊಂಡರು.

ವಿಶ್ವಗುರು ಹದಿನಾಲ್ಕನೇಯ ಲಿಯೋರವರು ಪಾಲನಾ ಸೇವೆಯ "ಅದೇ ಹಾದಿಯಲ್ಲಿ ಧೈರ್ಯದಿಂದ ನಡೆಯುತ್ತಾರೆ" ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಮಹಾಧರ್ಮಾಧ್ಯಕ್ಷರಾದ ಚುಂಗ್ ರವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಪೆರು
ಪೆರುವಿನ ಧರ್ಮಾಧ್ಯಕ್ಷರುಗಳು ಈ ಸಂತೋಷ ಮತ್ತು ಸ್ಮರಣಾರ್ಥದ ಮನೋಭಾವವನ್ನು ಹಂಚಿಕೊಂಡರು. ಸಂದೇಶದಲ್ಲಿ, ಅವರು ವಿಶ್ವಗುರುಗಳ ಧರೆಯ ಮೇಲಿನ ಕಾಳಜಿ ಮತ್ತು ಜನರೊಂದಿಗಿನ ಆಳವಾದ ಸಂಬಂಧಗಳನ್ನು ಕೊಂಡಾಡಿದರು. "ವಿನಮ್ರರ ಅಗತ್ಯಗಳಿಗೆ ಗಮನ ನೀಡುವ ಸಂದೇಶದೊಂದಿಗೆ ಅವರು ವಿಶ್ವಾಸವನ್ನು ಬಲಪಡಿಸಿದರು" ಎಂದು ಧರ್ಮಾಧ್ಯಕಕ್ಷರುಗಳು ಪೆರುವಿನಲ್ಲಿ ಅವರ ಧರ್ಮಪ್ರಚಾರಕ ಸೇವೆಯ ವರ್ಷಗಳನ್ನು ನೆನಪಿಸಿಕೊಳ್ಳುತ್ತಾ ಬರೆದರು. ನೆರವಿನ ಅತ್ಯಂತ ಅಗತ್ಯವಿರುವವರಿಗೆ ಅವರ ಸಾಮೀಪ್ಯ, ಸಮಯೋಚಿತ ಮಾತುಗಳು ಮತ್ತು ಬದ್ಧತೆ ನಮ್ಮ ಧರ್ಮಸಭೆಯಲ್ಲಿ ಅಳಿಸಲಾಗದ ಗುರುತು ಬಿಟ್ಟಿವೆ." ಕೃತಜ್ಞತೆಯಿಂದ "ಹದಿನಾಲ್ಕನೇಯ ಲಿಯೋರವರು ಚಿರಕಾಲ ಬಾಳಲಿ! ಎಂದರು."

ಉಕ್ರೇನ್
ಯುದ್ಧಪೀಡಿತ ಉಕ್ರೇನ್‌ನಿಂದ, ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾದ, ಪರಮಪೂಜ್ಯರಾದ ಬೀಟಿಟ್ಯೂಡ್ ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು, ನೂತನ ವಿಶ್ವಗುರುಗಳ ಮೊದಲ ಮಾತುಗಳಾದ "ನಿಮ್ಮೊಂದಿಗೆ ಶಾಂತಿ ಇರಲಿ" ಎಂಬುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಮಾತುಗಳು, ಬಳಲುತ್ತಿರುವ ಜನರಿಗೆ "ಭರವಸೆಯ ಮತ್ತು ವಿಶೇಷ ದೈವಿಕ ಆಶೀರ್ವಾದದ ಮಾತುಗಳಾಗಿವೆ" ಎಂದು ಅವರು ಹೇಳಿದರು. ಲಿಯೋ ಎಂಬ ಹೆಸರು, "ನ್ಯಾಯಯುತ ಮತ್ತು ಶಾಶ್ವತ ಶಾಂತಿ" ಎಂಬ ಧರ್ಮಸಭೆಯ ಸಿದ್ಧಾಂತವನ್ನು ನವೀಕರಿಸುವ ಬಯಕೆಯನ್ನು ಸೂಚಿಸುತ್ತದೆ. "ದೇವರು, ವಿಶ್ವಗುರು ಹದಿನಾಲ್ಕನೇಯ ಲಿಯೋರವರಿಗೆ ಪೇತ್ರರ ಉತ್ತರಾಧಿಕಾರಿಯ ಸೇವೆಗೆ ಬೇಕಾದ ಎಲ್ಲಾ ಆಶೀರ್ವಾದಗಳನ್ನುಅವರಿಗೆ " ಎಂದು ಅವರು ಪ್ರಾರ್ಥಿಸಿದರು.

ಯುನೈಟೆಡ್ ಸ್ಟೇಟ್ಸ್
ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ತಿಮೋತಿ ಬ್ರೋಗ್ಲಿಯೊವರು ಕೂಡ ಕೃತಜ್ಞತಾ ಪ್ರಾರ್ಥನೆಗಳನ್ನು ಸಲ್ಲಿಸಿದರು. ವಿಶ್ವಗುರು ಹದಿನಾಲ್ಕನೇಯ ಲಿಯೋರವರ ಅಂತರರಾಷ್ಟ್ರೀಯ ಅನುಭವ ಮತ್ತು ಧರ್ಮಪ್ರಚಾರಕ ಹೃದಯವನ್ನು ಧ್ಯಾನಿಸುತ್ತಾ, ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊವರು "ಖಂಡಿತವಾಗಿಯೂ, ಈ ರಾಷ್ಟ್ರದ ಮಗನನ್ನು ಆಯ್ಕೆ ಮಾಡಲಾಗಿದೆ ಎಂದು ನಾವು ಸಂತೋಷಪಡುತ್ತೇವೆ... ಆದರೆ ಅವರು ಈಗ ಎಲ್ಲಾ ಕಥೋಲಿಕರಿಗೆ ಮತ್ತು ಎಲ್ಲಾ ಒಳ್ಳೆಯ ಇಚ್ಛೆಯನ್ನು ಹೊಂದಿರುವ ಜನರಿಗೆ ಸೇರಿದವರು ಎಂದು ಹೇಳಿದರು. "ಶಾಂತಿ, ಏಕತೆ ಮತ್ತು ಧರ್ಮಪ್ರಚಾರಕ ಚಟುವಟಿಕೆ" ಗಾಗಿ ವಿಶ್ವಗುರುವಿನ ಆರಂಭಿಕ ಕರೆಗಳನ್ನು ಅವರು ಶ್ಲಾಘಿಸಿದರು. "ನಮ್ಮ ವಿಶ್ವಾಸದಲ್ಲಿ ನಮ್ಮನ್ನು ದೃಢೀಕರಿಸುವ ಮತ್ತು ಸುವಾರ್ತೆಯಿಂದ ಪ್ರೇರಿತವಾದ ಭರವಸೆಯಿಂದ ಜಗತ್ತನ್ನು ಶುಭಸಂದೇಶದ ಮೌಲ್ಯಗಳಿಂದ ತುಂಬುವ ಜಾಗರೂಕ ಮತ್ತು ಬುದ್ಧಿವಂತ ಕುರಿಗಾಹಿಯಾಗಲಿ" ಎಂದು ಪ್ರಾರ್ಥಿಸಿದರು.

ಕಾರಿತಾಸ್‌
ಅಂತರರಾಷ್ಟ್ರೀಯ ಕಾರಿತಾಸ್‌, ತನ್ನ ಅಧ್ಯಕ್ಷ ಕಾರ್ಡಿನಲ್ ಟಾರ್ಸಿಸಿಯೊ ಇಸಾವೊ ಕಿಕುಚಿರವರು ಮತ್ತು ಪ್ರಧಾನ ಕಾರ್ಯದರ್ಶಿ ಅಲಿಸ್ಟೈರ್ ಡಟ್ಟನ್ ಅರವರ ಮೂಲಕ ಮಾತನಾಡುತ್ತಾ, ವಿಶ್ವಗುರು ಹದಿನಾಲ್ಕನೇಯ ಲಿಯೋರವರೊಂದಿಗೆ ಕೆಲಸ ಮಾಡಲು ತನ್ನ ಕೃತಜ್ಞತೆ ಮತ್ತು ನವೀಕೃತ ಬದ್ಧತೆಯನ್ನು ವ್ಯಕ್ತಪಡಿಸಿತು. ಇದು ಧರ್ಮಸಭೆಗೆ ಮತ್ತು ಜಗತ್ತಿಗೆ ಒಂದು ರೋಮಾಂಚಕಾರಿ ಕ್ಷಣ" ಎಂದು ಡಟನ್ ರವರು ಹೇಳಿದರು, "ಶಾಂತಿ, ಒಗ್ಗಟ್ಟು, ಸಂವಾದ ಮತ್ತು ದಾನಧರ್ಮದ ಬಗ್ಗೆವಿಶ್ವಗುರುಗಳ ಸ್ಪಷ್ಟ ಕಾಳಜಿಯನ್ನು ತೋರಿಸಿದರು. "ಕಾರಿತಾಸ್‌ ಕೇವಲ ಮಾನವೀಯ ಸಂಘಟನೆಯಲ್ಲ; ಇದು ದೇವರ ಪ್ರೀತಿಯ ಕ್ರಿಯೆಯ ಅಭಿವ್ಯಕ್ತಿಯಾಗಿದೆ" ಎಂದು ಕಾರ್ಡಿನಲ್ ಕಿಕುಚಿರವರು ಹೇಳಿದರು.

ಜೆಆರ್‌ಎಸ್
ಜೆಸ್ವಿಟ್ ನಿರಾಶ್ರಿತರ ಸೇವೆ, ಯುಕೆ ಕೂಡ ನೂತನ ವಿಶ್ವಗುರುವನ್ನು ವಿಶೇಷ ಹರ್ಷೋದ್ಗಾರದಿಂದ ಸ್ವಾಗತಿಸಿತು. ದೇವರು ನಮ್ಮೆಲ್ಲರನ್ನೂ ಮಿತಿಯಿಲ್ಲದಷ್ಟೂ ಪ್ರೀತಿಸುತ್ತಾನೆ" ಎಂಬ ಅವರ ಸಂದೇಶ ಮತ್ತು ನಿರಾಶ್ರಿತರಿಗೆ ಅವರು ತೋರಿಸಿದ ಒಗ್ಗಟ್ಟು, ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಲು ಒತ್ತಾಯಿಸಲ್ಪಟ್ಟ ಎಲ್ಲರ ಪರವಾಗಿ ಕಥೋಲಿಕ ಧರ್ಮಸಭೆಯ ಸ್ಥಾನದ ಪ್ರಬಲ ಪ್ರದರ್ಶನಗಳಾಗಿವೆ" ಎಂದು ಜೆಆರ್‌ಎಸ್ ಯುಕೆ ನಿರ್ದೇಶಕ ಡೇವಿಡ್ ರಿಯಾಲ್ರವರು ಹೇಳಿದರು. ವಲಸಿಗರು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ವಿಶ್ವಗುರುಗಳ ಸುದೀರ್ಘ ಬೆಂಬಲವನ್ನು ಭರವಸೆಯ ಸಂಕೇತವೆಂದು ಪ್ರಶಂಸಿಸಲಾಯಿತು.
 

09 ಮೇ 2025, 11:37