ಹುಡುಕಿ

MILITARY-ACCIDENT MILITARY-ACCIDENT  (AFP or licensors)

ಕಾರ್ಡಿನಲ್ ಹೊಲೆರಿಚ್: ಶಾಂತಿಯ ನೈತಿಕತೆಯನ್ನು ಮರುಸ್ಥಾಪಿಸುವುದು

ಲಕ್ಸೆಂಬರ್ಗ್‌ನ ಮಹಾಧರ್ಮಾಧ್ಯಕ್ಷರು ಮತ್ತು COMECE ನ ಮಾಜಿ ಅಧ್ಯಕ್ಷರಾದ ಕಾರ್ಡಿನಲ್ ಜೀನ್-ಕ್ಲೌಡ್ ಹೊಲೆರಿಚ್ ರವರು "ಯುದ್ಧದ ಮೇಲಿನ ನಿಷೇಧ" ದ ಸವೆತ ಮತ್ತು ಶಸ್ತ್ರಾಸ್ತ್ರ ಸ್ಪರ್ಧೆಯ ಅತಿರೇಕದ ಒತ್ತಡದ ಬೆಳಕಿನಲ್ಲಿ "ವಿಶ್ವದ ಹೆಚ್ಚಿನ ನಾಯಕರನ್ನು ವ್ಯಾಪಿಸಿರುವ ನೈತಿಕ ಅರಿವಿನ ಕುಸಿತ" ಎಂದು ಅವರು ವಿವರಿಸುತ್ತಿದ್ದಾರೆ.

ರಾಬರ್ಟೊ ಸೆಟೆರಾ

ಲಕ್ಸೆಂಬರ್ಗ್‌ನ ಮಹಾಧರ್ಮಾಧ್ಯಕ್ಷರು ಮತ್ತು ಕಾರ್ಡಿನಲ್ಸ್ ಮಂಡಳಿಯ ಸದಸ್ಯರಾದ ಕಾರ್ಡಿನಲ್ ಜೀನ್-ಕ್ಲೌಡ್ ಹೊಲೆರಿಚ್ ರವರು ಯುರೋಪಿನ ರಾಜಕೀಯ ಚಲನಶೀಲತೆಯ ತೀವ್ರ ವೀಕ್ಷಕರಾಗಿದ್ದು, ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಆಯೋಗದ (COMECE) ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಸ್ತುತವಾಗಿ ಯುರೋಪಿನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಉಪಾಧ್ಯಕ್ಷರಾಗಿದ್ದಾರೆ.

ಪ್ರಶ್ನೆ: ಪರಮಪೂಜ್ಯರೇ, ಇತ್ತೀಚಿನ ದಿನಗಳಲ್ಲಿ ಯುರೋಪಿನ ನಾಯಕರು ಅನುಮೋದಿಸಿದ 'ಯುರೋಪ್ ನ್ನು ಮರು ಶಸ್ತ್ರಸಜ್ಜಿತಗೊಳಿಸುವ' ಕಾರ್ಯಕ್ರಮದ ಬಗ್ಗೆ ನಿಮ್ಮ ನಿರ್ಧಾರವೇನು?
ಮೊದಲನೆಯದಾಗಿ ನಾನು ಈ ವಿಷಯಯನ್ನು ಹೇಳಲೇಬೇಕು, ಈ ಶಸ್ತ್ರಾಸ್ತ್ರ ಸ್ಪರ್ಧೆಯು ಯುರೋಪಿನಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ತೀವ್ರಗೊಂಡಿದ್ದು, ಇದು ಅತ್ಯಂತ ಕಳವಳಕಾರಿಯಾಗಿದೆ, ಆದರೂ ಸಂಪೂರ್ಣವಾಗಿ ಆತಂಕಕಾರಿಯಾಗಿದೆ. ಯಾವುದೇ ರಾಜಕೀಯ ಪರಿಗಣನೆಗಳನ್ನು ಮಾಡುವ ಮೊದಲು, ಪ್ರಪಂಚದ ಹೆಚ್ಚಿನ ನಾಯಕರನ್ನು ಹಿಂದಿಕ್ಕಿರುವ ನೈತಿಕ ಅರಿವಿನ ಕುಸಿತದ ಬಗ್ಗೆ ನಾವು ಚಿಂತಿಸಬೇಕು. ಎರಡನೇ ಮಹಾಯುದ್ಧದ ನಂತರ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರಭಾವ ಬೀರಿದ ಯುದ್ಧದ ವಿರುದ್ಧದ ನಿಷೇಧವು ತನ್ನ ಹಿಡಿತವನ್ನು ಕಳೆದುಕೊಂಡಂತೆ ಕಾಣುತ್ತದೆ. ಆ ನೈತಿಕ ಪ್ರಜ್ಞೆಯನ್ನು ಪುನಃಸ್ಥಾಪಿಸದೆ, ಯಾವುದೇ ರಾಜಕೀಯ ತಂತ್ರವು ಪರಿಣಾಮಕಾರಿಯಾಗುವುದಿಲ್ಲ ಮತ್ತು ಜಗತ್ತು ಅಪಾಯಕಾರಿ ಹಾದಿಯಲ್ಲಿ ಜಾರುವ ಅಪಾಯದ ಸನ್ನಿವೇಶವನ್ನು ಎದುರಿಸುತ್ತಿದೆ.

ಪ್ರಶ್ನೆ: ಇದು ಖಂಡಿತವಾಗಿಯೂ ನೈತಿಕ ವಿಷಯ, ಆದರೆ ಇದು ಗಮನಾರ್ಹ ರಾಜಕೀಯ ಬದಲಾವಣೆಗಳಿಂದ ಮುಚ್ಚಿಹೋಗಿರುವಂತೆ ಕಾಣಿಸಬಹುದು...
ಖಂಡಿತ, ಈ ಬದಲಾವಣೆಗಳಲ್ಲಿ ಅತ್ಯಂತ ಮಹತ್ವದ್ದಾಗಿರುವುದು ಬಹುಪಕ್ಷೀಯತೆಯನ್ನು ತ್ಯಜಿಸುವ ಪ್ರವೃತ್ತಿ ಎಂದು ನಾನು ಹೇಳುತ್ತೇನೆ. ತಮ್ಮದೇ ಆದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮಹಾಶಕ್ತಿಗಳ ಹಳೆಯ ಪರಿಕಲ್ಪನೆಯ ಪುನರುಜ್ಜೀವನದಿಂದ ಇಂದು ಇದು ಸ್ಪಷ್ಟವಾಗುತ್ತಿದೆ. ಆದಾಗ್ಯೂ, ಬಹುಪಕ್ಷೀಯ ಚೌಕಟ್ಟಿನೊಳಗೆ ಮಾತ್ರ ಜಗತ್ತು ಶಾಂತಿಯನ್ನು ಮರಳಿ ಪಡೆಯಬಹುದು ಎಂದು ನಾನು ನಂಬುತ್ತೇನೆ. ವಿಶ್ವಗುರು ಫ್ರಾನ್ಸಿಸ್ ರವರು ಬಹುಪಕ್ಷೀಯತೆಯ ಪ್ರಾಮುಖ್ಯತೆಯನ್ನು ಸರಿಯಾಗಿಯೇ ಒತ್ತಾಯಿಸುತ್ತಾರೆ; ವಾಸ್ತವವಾಗಿ, ಇದು ಪವಿತ್ರ ಪೀಠಾಧೀಕಾರ ರಾಜಕೀಯ ಮತ್ತು ರಾಜತಾಂತ್ರಿಕ ಉಪಸ್ಥಿತಿಯ ಮೂಲಾಧಾರವಾಗಿದೆ ಎಂದು ನಾನು ಹೇಳುತ್ತೇನೆ.

ಪ್ರಶ್ನೆ: ಯುರೋಪಿನ ರಕ್ಷಣೆಯ ಮೇಲಿನ ಈ ನವೀಕೃತ ಗಮನವನ್ನು ಅಮೇರಿಕದ ನೀತಿಯಲ್ಲಿನ ಬದಲಾವಣೆಯು ವಿವರಿಸುತ್ತದೆಯೇ?
ಯುರೋಪಿಗೆ, ಬಹುಪಕ್ಷೀಯತೆಯು ನಿರ್ಣಾಯಕ ಮತ್ತು ಹಂಚಿಕೆಯ ರಾಜಕೀಯ ಆಯ್ಕೆಯಾಗಿದೆ. ಆದಾಗ್ಯೂ, ಅಟ್ಲಾಂಟಿಕ್‌ನಾದ್ಯಂತ, ಈ ದೃಷ್ಟಿಕೋನವು ಮರೆಯಾಗುತ್ತಿರುವಂತೆ ತೋರುತ್ತಿದೆ. ಯುರೋಪ್ ತನ್ನನ್ನು ತಾನು ಸ್ವಾಯತ್ತವಾಗಿ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಬಲವಾದ ರಾಜಕೀಯ ಗುರುತನ್ನು ಮರಳಿ ಪಡೆಯಲು ಸಾಧ್ಯವಾದರೆ, ಅದು ಬಹುಪಕ್ಷೀಯ ಪಾತ್ರವನ್ನು ವಾಸ್ತವಿಕವಾಗಿ ಬಲಪಡಿಸುವ ಮೂಲಕ ತನಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸೇವೆ ಸಲ್ಲಿಸುತ್ತದೆ. ಇದಲ್ಲದೆ, ಯುರೋಪ್ ಅಮೇರಿಕದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಮಿಲಿಟರಿ ಉತ್ಪಾದನೆಯಲ್ಲಿ ಹೆಚ್ಚಿನ ಸ್ವಾಯತ್ತತೆಗಾಗಿ ಶ್ರಮಿಸಬೇಕು ಎಂದು ನಾನು ನಂಬುತ್ತೇನೆ. ಅಂತಹ ಅವಲಂಬನೆಯು ದುರ್ಬಲತೆಗಳನ್ನು ಸೃಷ್ಟಿಸುತ್ತದೆ.

ಪ್ರಶ್ನೆ: ಯುರೋಪಿನ ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳು ಸಂಕಷ್ಟದಲ್ಲಿರುವಾಗ ಇಷ್ಟೊಂದು ಬೃಹತ್ ಮಿಲಿಟರಿ ಹೂಡಿಕೆ ಮಾಡುತ್ತಿರುವುದು ಗಮನಾರ್ಹವಲ್ಲವೇ? ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಎಲ್ಲೆಡೆ ಬಿಕ್ಕಟ್ಟಿನಲ್ಲಿವೆ, ಆದರೂ ಶಸ್ತ್ರಾಸ್ತ್ರಗಳಿಗಾಗಿ 800 ಬಿಲಿಯನ್ ಯುರೋಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ವಿಮರ್ಶಕರು ವಾದಿಸುತ್ತಾರೆ.
ವಿಶ್ವಗುರು ಫ್ರಾನ್ಸಿಸ್ ರವರು ಅತ್ಯಂತ ಸಮಂಜಸವಾದ ಪರಿಹಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ನಾನು ನಂಬುತ್ತೇನೆ: ಯುರೋಪಿನ ಒಕ್ಕೂಟದೊಳಗಿನ ಶಸ್ತ್ರಾಸ್ತ್ರ ಉತ್ಪಾದನೆಯಿಂದ ಬರುವ ಎಲ್ಲಾ ಲಾಭಗಳನ್ನು ಕಡ್ಡಾಯವಾಗಿ ಸಾಮಾಜಿಕ ಉಪಕ್ರಮಗಳಲ್ಲಿ ಮರುಹೂಡಿಕೆ ಮಾಡಬೇಕು. ಶಸ್ತ್ರಾಸ್ತ್ರಗಳಿಂದ ಯಾರೂ ಲಾಭ ಪಡೆಯಬಾರದು; ಬದಲಿಗೆ, ಆ ಲಾಭವನ್ನು ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಲು ಬಳಸಬೇಕು. ಇದು ತಕ್ಷಣವೇ ಕಾರ್ಯಸಾಧ್ಯವಾದ ಪ್ರಸ್ತಾಪವಾಗಿದ್ದು, ಮುಂಬರುವ ದಿನಗಳಲ್ಲಿ ನಾವು ಭೇಟಿಯಾದಾಗ ಪವಿತ್ರ ಪೀಠಾಧಿಕಾರದಲ್ಲಿರುವ ಯುರೋಪಿನ ಒಕ್ಕೂಟದ ರಾಯಭಾರಿಯೊಂದಿಗೆ ಇದನ್ನು ಪ್ರಸ್ತಾಪಿಸಲು ನಾನು ಉದ್ದೇಶಿಸಿದ್ದೇನೆ ಎಂದು ಹೇಳಿದರು.
 

11 ಮಾರ್ಚ್ 2025, 13:12